ಎಣ್ಣೆ ಕಾಳುಗಳು

	ಎಣ್ಣೆಯನ್ನು ಕೊಡುವ ಸಸ್ಯಬೀಜಗಳು. ರೂಢಿಯಲ್ಲಿ ಶೇಂಗಾ, ಎಳ್ಳು, ಅಗಸೆ, ಔಡಲ, ಸಾಸಿವೆ ಮತ್ತು ಇವುಗಳ ಪ್ರಭೇದಗಳನ್ನು ಕುರಿತು ಬಳಸುವ ಪದ. ಎಣ್ಣೆ ಕಾಳುಗಳಿಂದ ಪಡೆಯುವ ಉಪೋತ್ಪನ್ನಗಳು ಸಾಮಾನ್ಯವಾಗಿ ದನಗಳಿಗೆ ಹಿಂಡಿ ಮತ್ತು ಸಸ್ಯಗಳಿಗೆ ಗೊಬ್ಬರ.

	ಜಗತ್ತಿನಲ್ಲಿ ಎಣ್ಣೆ ಕಾಳುಗಳನ್ನು ಬೆಳೆಯುವ ಒಟ್ಟು ವಿಸ್ತೀರ್ಣ 80.15 ಮಿಲಿಯನ್ ಎಕರೆ; ಉತ್ಪನ್ನ 205.304 ಲಕ್ಷ ಟನ್. ಈ ಪೈಕಿ ಭಾರತದ ಕೊಡುಗೆಗಳು ಕ್ರಮವಾಗಿ 33.1 ಮಿ. ಎಕರೆ ಮತ್ತು 63.5 ಲಕ್ಷ ಟನ್. ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಪ್ರಥಮಸ್ಥಾನ. ಇಲ್ಲಿಂದ ವಿದೇಶಗಳಿಗೆ ರಫ್ತಾಗುವ ಸಾಮಗ್ರಿಗಳಲ್ಲಿ ಇವುಗಳ ಸ್ಥಾನ ಗಮನಾರ್ಹವಾದದ್ದು.

	ಭಾರತದ ವ್ಯವಸಾಯ ಕ್ಷೇತ್ರದ 10% ಎಣ್ಣೆ ಕಾಳುಗಳ ಉತ್ಪಾದನೆಗೆ ಮೀಸಲಾಗಿದೆ. ಒಟ್ಟು ಬೆಳೆಗಳ 12 1/2% ಉತ್ಪತ್ತಿ ಎಣ್ಣೆ ಕಾಳುಗಳದೇ. ಶೇಂಗಾ, ಎಳ್ಳು, ಸಾಸಿವೆ ವಿಭಾಗಗಳಲ್ಲಿ ಭಾರತದ ಸ್ಥಾನ ಜಗತ್ತಿನಲ್ಲಿ ಪ್ರಥಮ ; ಔಡಲ ವಿಭಾಗದಲ್ಲಿ ದ್ವಿತೀಯ (ಬ್ರೆಝಿಲ್ ಪ್ರಥಮ), ಅಗಸೆ ವಿಭಾಗದಲ್ಲಿ ಅಮೆರಿಕ, ಅರ್ಜೆಂಟೀನ, ಕೆನಡಗಳ ತರುವಾಯದ ನಾಲ್ಕನೆಯ ಸ್ಥಾನ. ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಮೈಸೂರು, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್, ಒರಿಸ್ಸ, ಪಶ್ಚಿಮಬಂಗಾಲ, ಬಿಹಾರ, ಅಸ್ಸಾಂ, ಕೇರಳ ಮತ್ತು ಜಮ್ಮು-ಕಾಶ್ಮೀರ ಇವು ಎಣ್ಣೆ ಕಾಳುಗಳನ್ನು ಬೆಳೆಯುವ ಪ್ರಮುಖ ರಾಜ್ಯಗಳು. ಮೈಸೂರು ರಾಜ್ಯದಲ್ಲಿ ಭಾರತದ ಒಟ್ಟು ಎಣ್ಣೆಕಾಳಿನ ಕ್ಷೇತ್ರದ 9% ರಷ್ಟಿದೆ. ಉತ್ಪತ್ತಿ 10% ರಷ್ಟಿದೆ. ಮೈಸೂರು ರಾಜ್ಯದಲ್ಲಿ ಒಟ್ಟು ಬೆಳೆಗಳ ಕ್ಷೇತ್ರದ 12% ರಷ್ಟು ಎಣ್ಣೆ ಕಾಳುಗಳ ಕ್ಷೇತ್ರವಿದೆ. ಈ ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯುವ ಎಣ್ಣೆಕಾಳುಗಳು ಶೇಂಗಾ, ಔಡಲ, ಗುರೆಳ್ಳು, ಎಳ್ಳು, ಕುಸಬಿ, ಅಗಸೆ ಮತ್ತು ಸಾಸಿವೆ. ಇಲ್ಲಿನ ಉತ್ಪನ್ನಗಳ ವಿವರ ಕೆಳಗಿನ ಕೋಷ್ಟಕದಲ್ಲಿ ತೋರಿಸಿದೆ.

	ಎಲ್ಲ ಎಣ್ಣೆಕಾಳುಗಳ ಒಟ್ಟು ಸರಾಸರಿ ವಾರ್ಷಿಕ ಉತ್ಪಾದನೆ (ಮೈಸೂರು ರಾಜ್ಯದಲ್ಲಿ) 5,53,466 ಟನ್ ಮತ್ತು ಇವುಗಳ ಒಟ್ಟು ಬೆಲೆ ಸುಮಾರು 36 ಕೋಟಿ ರೂಪಾಯಿಗಳು. ಇದರಲ್ಲಿ 4,98,123 ಟನ್ ಎಣ್ಣೆಕಾಳುಗಳು, ಅಂದರೆ 32.40 ಕೋಟಿ ರೂಪಾಯಿಗಳ ಬೆಲೆಯ ಎಣ್ಣೆಕಾಳುಗಳು ಪ್ರತಿವರ್ಷ ಮಾರಾಟವಾಗುತ್ತವೆ. (ಪುಟ 907ರಲ್ಲಿ ಕೊಟ್ಟಿರುವ ಪಟ್ಟಿ 1ನ್ನು ನೋಡಿ).

ಭಾರತದ ಐದು ಮುಖ್ಯ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ 66% ಶೇಂಗಾ, 18% ಸಾಸಿವೆ, 7% ಅಗಸೆ, 6% ಎಳ್ಳು ಮತ್ತು 1% ಔಡಲ. ಭಾರತದಲ್ಲಿ ಉತ್ಪಾದನೆಯಾದ ಎಣ್ಣೆಕಾಳುಗಳ ಶೇಕಡಾ ವಿನಿಯೋಗ ಈ ಕೆಳಗಿನಂತಿದೆ (1960-61ರ ಪ್ರಕಾರ).

 ಎಣ್ಣೆಕಾಳಿನ ಹೆಸರು  ರಫ್ತಾಗುವ ಪ್ರಮಾಣ  ಬೀಜಕ್ಕಾಗಿ ಉಪಯೋಗಿಸಿದ ಪ್ರಮಾಣ  ಆಹಾರಕ್ಕಾಗಿ ಉಪಯೋಗಿಸಿದ ಪ್ರಮಾಣ  ಎಣ್ಣೆಗಾಗಿ ಉಪಯೋಗಿಸಿದ ಪ್ರಮಾಣ ಶೇಂಗಾ  0.8  12.0  7.0  79.6 ಎಳ್ಳು  0.1  2.3  18.9  78.7 ಸಾಸಿವೆ  ಸ್ವಲ್ಪ ಪ್ರಮಾಣ  1.5  8.4  90.1 ಅಗಸೆ  ಸ್ವಲ್ಪ ಪ್ರಮಾಣ  5.0  7.1  87.9 ಔಡಲ  ----  5.9  ----  94.1

ಭಾರತದಿಂದ ಪರದೇಶಗಳಿಗೆ 1959-62ರ ಅವಧಿಯಲ್ಲಿ ರಫ್ತಾದ ಎಣ್ಣೆ ಮತ್ತು ಹಿಂಡಿಗಳ ವಿವರ ಪಟ್ಟಿ 2 ರಲ್ಲಿಟ್ಟಿದೆ (ಪುಟ 907)

ಭಾರತದಲ್ಲಿ ಮೊದಲನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದಲ್ಲಿ ಅಂದರೆ 1955-56ರಲ್ಲಿ 54,76,000 ಟನ್ನು ಎಣ್ಣೆ ಕಾಳಿನ ಅಧಿಕ ಉತ್ಪಾದನೆ ಗುರಿಯನ್ನು ಸಾಧಿಸಬೇಕಾಗಿತ್ತು. ಈ ಅವಧಿಯಲ್ಲಿ 56,43,000 ಟನ್ನು ಅಧಿಕ ಉತ್ಪಾದನೆಯನ್ನು ಪಡೆಯಲಾಯಿತು. ಎರಡನೆ ಪಂಚವಾರ್ಷಿಕ ಯೋಜನೆಯ ಅಂತ್ಯದಲ್ಲಿ ಅಂದರೆ 1960-61ರಲ್ಲಿ ಭಾರತ 75.5 ಲಕ್ಷ ಟನ್ ಎಣ್ಣೆಕಾಳುಗಳ ಅಧಿಕ ಉತ್ಪಾದನೆಯ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ ಈ ಅವಧಿಯಲ್ಲಿ 65.2 ಲಕ್ಷ ಟನ್ ಅಧಿಕ ಉತ್ಪಾದನೆಯನ್ನು ಮಾತ್ರ ಪಡೆಯಲಾಯಿತು. ಮೂರನೆ ಪಂಚವಾರ್ಷಿಕ ಯೋಜನಾಂತ್ಯದಲ್ಲಿ ಅಂದರೆ 1965-66ರ ಅಂತ್ಯದಲ್ಲಿ ಭಾರತ 98.2 ಲಕ್ಷ ಟನ್ ಎಣ್ಣೆ ಕಾಳುಗಳ ಅಧಿಕ ಉತ್ಪಾದನೆಯ ಗುರಿಯನ್ನು ಇಟ್ಟುಕೊಂಡಿತ್ತು.

ಪಟ್ಟಿ 1
ಕ್ಷೇತ್ರ-ಸಾವಿರ ಎಕರೆಗಳಲ್ಲಿ. ಉತ್ಪನ್ನ -ಸಾವಿರ ಟನ್ನುಗಳಲ್ಲಿ
ವರ್ಷ
ಶೇಂಗಾ
ಔಡಲ
ಅಗಸೆ
ಎಳ್ಳು
ಕುಸುಬಿ
ಗುರೆಳ್ಳು
ಸಾಸಿವೆ

ಕ್ಷೇತ್ರ
ಉತ್ಪನ್ನ
ಕ್ಷೇತ್ರ
ಉತ್ಪನ್ನ
ಕ್ಷೇತ್ರ
ಉತ್ಪನ್ನ
ಕ್ಷೇತ್ರ
ಉತ್ಪನ್ನ
ಕ್ಷೇತ್ರ
ಉತ್ಪನ್ನ
ಕ್ಷೇತ್ರ
ಉತ್ಪನ್ನ
ಕ್ಷೇತ್ರ
ಉತ್ಪನ್ನ

1957-58

1958-59

1959-60

1960-61

1961-62
2131

2029

2098

2121

2132

619

536

381

415

498
101

100

100

98

98
8

11

15

9

10
126

127

118

121

120
10

10

9

10

10
162

173

168

162

162

13

15

12

9

9
385

365

358

363

355

26

24

23

24

25
72

65

69

69

62
5

4

4

3

3
7

6

9

9

8
0.6

0.6

0.8

0.9

0.8

ಪಟ್ಟಿ 2
ಎಣ್ಣೆ (1000 ಟನ್ನುಗಳಲ್ಲಿ)
1959-60
1960-61
1961-62

ಶೇಂಗಾ
ಔಡಲ
ಅಗಸೆ
ಸಾಸಿವೆ
ಎಳ್ಳು
ಹಿಂಡಿ (1000ಟನ್ನುಗಳಲ್ಲಿ)
ಶೇಂಗಾ
ಅಗಸೆ
ಎಳ್ಳು
385
469
185
3
ಸ್ವಲ್ಪ ಪ್ರಮಾಣ

445.7
293
34
10
467
23
2
ಸ್ವಲ್ಪ ಪ್ರಮಾಣ

3452
3430
12
68
249
7
2
ಸ್ವಲ್ಪ ಪ್ರಮಾಣ

4465
69
2

ಮೈಸೂರು ರಾಜ್ಯದಲ್ಲಿ ಮೊದಲನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದಲ್ಲಿ ಎಣ್ಣೆಕಾಳುಗಳ ಅಧಿಕ ಉತ್ಪತ್ತಿ 5.32 ಲಕ್ಷ ಟನ್ ಆಯಿತು. ಎರಡನೆಯ ಪಂಚವಾರ್ಷಿಕ ಯೋಜನಾಂತ್ಯದಲ್ಲಿ 7 ಲಕ್ಷ ಟನ್ ಎಣ್ಣೆ ಕಾಳಿನ ಅಧಿಕ ಉತ್ಪಾದನೆಯ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ 4.57 ಲಕ್ಷ ಟನ್ ಅಧಿಕ ಉತ್ಪಾದನೆಯನ್ನು ಪಡೆಯಲಾಯಿತು. ಮೂರನೆಯ ಪಂಚವಾರ್ಷಿಕ ಯೋಜನಾಂತ್ಯದಲ್ಲಿ ಒಟ್ಟು 8.75 ಲಕ್ಷ ಟನ್ ಎಣ್ಣೆ ಕಾಳುಗಳ ಅಧಿಕ ಉತ್ಪಾದನೆಯನ್ನು ಹೆಚ್ಚಿಸಲಿಕ್ಕೆ ತೀವ್ರ ಬೇಸಾಯದ ಈ ಕೆಳಗಿನ ಕ್ರಮಗಳನ್ನು ಕೈಕೊಳ್ಳಲಾಗಿದೆ.
	1. ಸುಧಾರಿಸಿದ ಬೀಜದ ಉಪಯೋಗ : ಇದರಿಂದ ಪ್ರತಿ ಎಕರೆಗೆ ಆದಾಯ 10%-15% ರಷ್ಟು ಹೆಚ್ಚಿಗೆ ಬರುವುದು.
	2. ರಾಸಾಯನಿಕ ಗೊಬ್ಬರದ ಉಪಯೋಗ : ನೀರಾವರಿ ಮತ್ತು ಗಡಿನಾಡು ಪ್ರದೇಶಗಳಲ್ಲಿ ಕೃತ್ರಿಮ ಗೊಬ್ಬರವನ್ನು ಉಪಯೋಗಿಸುವುದರಿಂದ 30% ರಷ್ಟು ಹೆಚ್ಚಿಗೆ ಉತ್ಪನ್ನ ಬರುವುದು.
	3. ನೀರಾವರಿ ಉಪಯೋಗ : ಸಾಧ್ಯವಿದ್ದಲ್ಲೆಲ್ಲ ಮಳೆಗಾಲದಲ್ಲಿ ಮಳೆ ಕಡಿಮೆ ಆದಾಗ, ಚಳಿಗಾಲದಲ್ಲಿ ಮತ್ತು ಬೇಸಗೆ ಕಾಲಗಳಲ್ಲಿ ನೀರಾವರಿಯಿಂದ ಬೆಳೆ ಬೆಳೆಯುವುದರಿಂದ ಪ್ರತಿ ಎಕರೆಯ ಉತ್ಪನ್ನ 2-3 ಪಟ್ಟಾಗುತ್ತದೆ.
	4. ಬೆಳೆಯ ಸಂರಕ್ಷಣೆ : ಸಕಾಲದಲ್ಲಿ ರೋಗ ಮತ್ತು ಕೀಟಕಗಳಿಂದ ಬೆಳೆಯನ್ನು ಸಂರಕ್ಷಿಸಿದಲ್ಲಿ 15%-30% ಅಧಿಕ ಉತ್ಪಾದನೆ ಸಾಧಿಸಲಾಗುತ್ತದೆ. 								
	(ಜಿ.ಬಿ.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ